WELL COME TO THIS BLOG. PLEASE VISIT AGAIN.. ನಮ್ಮ ಬ್ಲಾಗ್‌ಗೆ ಸ್ವಾಗತಗಳು. ಪುನಃ ಭೇಟಿ ನೀಡಿ ನಿಮ್ಮ ಅಭಿಪ್ರಾಯ ತಿಳಿಸಿ... ನಾಗರಾಜ ಭಾಸ್ಕರ್‌ ಸಹ ಶಿಕ್ಷಕರು...

1 / 6
Tour 2018
2 / 6
My Birthday in School
3 / 6
Tour with Students
4 / 6
With Staff
5 / 6
Selfie in Tour
6 / 6
Watching 3D movie


Click Image To View Clearly..

MATHEMATICIANS..

SRINIVASA RAMANUJAN.. 
ಜನನ 22 ಡಿಸೆಂಬರ್ 1887.. 
                                 ಗಣಿತ ದಿನ..
    ರಾಮಾನುಜನ್ ಬದುಕಿದ್ದು ಕೇವಲ 32 ವಷ೯ಗಳು. ಆದರೆ ಅವರ ಸಾಧನೆ ಈ ಜಗತ್ತಿನಲ್ಲಿ ಮನುಕುಲವಿರುವವರೆಗೂ ಶಾಶ್ವತವಾಗಿರುತ್ತದೆ. ಇ೦ದು ನಾವು ಬದುಕುತ್ತಿರುವ ಡಿಜಿಟಲ್ ತ೦ತ್ರಜ್ಞಾನಕ್ಕೆ ಅವರ ಕೊಡುಗೆ ಅಪಾರ. ಇ೦ದಿನ ಎಷ್ಟೋವೈಜ್ಞಾನಿಕ ಆವಿಷ್ಕಾರಗಳಿಗೆ ಅವರು ರೂಪಿಸಿದ ಗಣಿತದ ಸೂತ್ರಗಳೇ ಕಾರಣ ಎ೦ದರೆ ಅತಿಶಯೋಕ್ತಿಯಲ್ಲ ರಾಮಾನುಜನ್ ಅವರ ಸಂಶೋಧನೆಗಳಲ್ಲಿ ಮುಖ್ಯವಾಗಿ ಈ ಕ್ಷೇತ್ರಗಳನ್ನು ಹೆಸರಿಸಬಹುದು ಅವಿಭಾಜ್ಯ ಸಂಖ್ಯೆಗಳ ಬಗ್ಗೆ ಸಂಶೋಧನೆ ಪಾರ್ಟಿಷನ್ ಸಂಖ್ಯೆಗಳ ಬಗ್ಗೆ ಸಂಶೋಧನೆ ರಾಮಾನುಜನ್ ಊಹೆ ರಾಮಾನುಜನ್-ಪೀಟರ್ಸನ್ ಊಹೆ ಅವರು ಮಾಯಾಚೌಕಗಳು, ಸಂಖ್ಯಾಸಿದ್ಧಾಂತ, ಎಲಿಪ್ಟಿಕಲ್ ಇಂಟಿಗ್ರಲ್ಸ್ ಇತ್ಯಾದಿ ಗಣಿತದ ಸಮಸ್ಯೆಗಳನ್ನು ತಾವೇ ಸೃಷ್ಟಿಸಿಕೊಂಡು ಅದನ್ನು ಪರಿಹರಿಸುತ್ತಿದ್ದರು. ಗಣಿತಾಸಕ್ತಿಯನ್ನು ಬಿಡದೆ ಸರ್ಕಾರದ ಸ್ಕಾಲರ್‌ಶಿಪ್‌ನಿಂದಾಗಿ ಲಂಡನ್‌ಗೆ ತೆರಳಿ ಜೆ.ಹೆಚ್.ಹಾರ್ಡಿಯವರೊಡನೆ ಸೇರಿ ವಿಭಾಗೀಕರಣ ಫಲನ, ಉಚ್ಛ ಅತ್ಯಂತ ಅವಿಭಾಜ್ಯ ಸಂಖ್ಯೆಗಳು, ವರ್ಗಗಳ ಮೊತ್ತಗಳಾಗಿ ಸಂಖ್ಯೆಗಳ ನಿರೂಪಣೆ, ಸಂತತ ಭಿನ್ನರಾಶಿಗಳು, ಟೋಫಲನದ ಬಗ್ಗೆ ಸಂಶೋಧನೆ ಕೈಗೊಂಡರು. ತಮ್ಮ ಗುರು ಮತ್ತು ಮತ್ತೊಬ್ಬ ಗಣಿತಜ್ಞ ಜಿ ಎಚ್ ಹಾರ್ಡಿ ಅವರೊಂದಿಗೆ ಲಂಡನ್ ನಲ್ಲಿ ನಡೆಸಿದ ಸಂಶೋಧನೆ ಗಣಿತ ಶಾಸ್ತ್ರದ ಹಲವು ಕಗ್ಗಂಟುಗಳಿಗೆ ಉತ್ತರ ನೀಡಿತ್ತು. ಲಂಡನ್ ಮ್ಯಾಥಮೆಟಿಕಲ್ ಸೊಸೈಟಿ, ಫೆಲೊ ಆಫ್ ರಾಯಲ್ ಸೊಸೈಟಿ ಮುಂತಾದ ಗೌರವಗಳನ್ನು ಪಡೆದಿದ್ದ ಶ್ರೀನಿವಾಸ ರಾಮಾನುಜನ್ ಅತಿ ಕಿರಿಯ ವಯಸ್ಸಿನಲ್ಲಿ ಅಂದರೆ ತಮ್ಮ 32ನೆ ವಯಸ್ಸಿನಲ್ಲಿ ಆರೋಗ್ಯದ ತೊಂದರೆಗಳಿಂದ ಮೃತಪಟ್ಟರು.